`ಐ ಆಮ್ ಇನ್ ಲವ್` ಮೊದಲ ಹಂತ ಮುಕ್ತಾಯ
Posted date: 16 Mon, Apr 2012 ? 08:23:36 AM

ಸ್ನೇಹಜೀವಿ ಪತ್ರಕರ್ತ ನಂದಕುಮಾರ್ ಅವರ ದ್ವೀತೀಯ ನಿರ್ದೇಶನದ ಚಿತ್ರ ’ಐ ಆಮ್ ಇನ್ ಲವ್’ ಬೆಂಗಳೂರಿನಲ್ಲಿ ಹಾಗೂ ನಂದಿ ಬೆಟ್ಟದಲ್ಲಿ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿ ದ್ವೀತೀಯ ಹಂತಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಾಡುಗಳಿಗಾಗಿ ಬೇಕಲಕೋಟೆ ಹಾಗೂ ಬ್ಯಾಕಾಂಕ್ ಪ್ರಯಾಣ ಬೆಳಸಲು ಇಚ್ಛಿಸಿರುವ ಈ ತಂಡವು ಈಗಿನ ಪರಿಸ್ಥಿತಿಗೆ ಒಂದು ವಿಶೇಷವಾದ ಪ್ರೇಮ ಕತೆಯನ್ನು ಅನೇಕ ತಿರುವುಗಳ ಸಹಾಯದೊಂದಿಗೆ ಮಾಡಿಕೊಂಡಿದೆ.

ಶ್ರೀಮತಿ ಲಲಿತಾ ಅವರು ಹೊಸೂರಿನಿಂದ ಬೆಂಗಳೂರಿಗೆ ಬಂದು ಚಿತ್ರ ನಿರ್ಮಾಣಕ್ಕೆ ತೊಡಗಿದ್ದಾರೆ. ಇಂಜಿನಿಯರಿಂಗ್ ಮುಗಿಸಿರುವ ಮಹೇಶ್ ಪ್ರಥಮ ಚಿತ್ರದಲ್ಲಿ ಫ್ಯಾಶನ್ ಫೋಟೋಗ್ರಾಫರ್ ಆಗಿ ಅಭಿನಯಿಸುತ್ತಿದ್ದಾರೆ. ಇಂಜಿನಿಯರಿಂಗ್ ಓದುತ್ತಿರುವ ಕಾವ್ಯ ಶೆಟ್ಟಿ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನೇಹಾ ಈ ಚಿತ್ರದ ದ್ವೀತೀಯ ನಾಯಕಿ. ತಿಲಕ್, ಧi, ರಮೇಶ್ ಭಟ್, ಮಾಲತಿ ಸರದೇಶಪಾಂಡೆ, ರಶ್ಮಿ, ಮನಮೋಹನ್ ರಾಯ್, ಕುರಿರಂಗ, ಕೋಟ್ರೇಶ್ (ಜೂನಿಯರ್ ರಂಗಾಯಣ ರಘು), ವೀರೇಶ್, ಮಮತ ಹಾಗೂ ಇನ್ನಿತರರು ಪೋಷಕ ಪಾತ್ರದಲ್ಲಿದ್ದಾರೆ. ಮೋಹನ್ ಬಿ. ಕೆರೆ ಕಲಾ ನಿರ್ದೇಶನ, ಚಂದ್ರಮೋಹನ್ ನೃತ್ಯ, ಮಾಧವನ್ ಮೇಕಪ್, ರಾಜಶೇಖರ ರೆಡ್ಡಿ ಸಂಕಲನ, ಕೌರವ ವೆಂಕಟೇಶ್ ಹಾಗೂ ಹ್ಯಾರಿಸ್ ಜಾನಿ ಸಾಹಸ ನಿರ್ದೇಶನ, ರಾಮ್ ಕುಮಾರ್ ವಸ್ತ್ರ ವಿನ್ಯಾಸ ಮತ್ತು ಬದ್ರಿ ಅವರು ಸ್ಥಿರ ಚಿತ್ರಣ ಒದಗಿಸಿದ್ದಾರೆ.

ಕನ್ನಡ ಚಿತ್ರರಂಗದ ಪ್ರಸಿದ್ದ ಛಾಯಾಗ್ರಾಹಕ ಪಿ.ಕೆ.ಎಚ್. ದಾಸ್ ೬ ವರ್ಷಗಳ ಹಿಂದೆ ನಂದಕುಮಾರ್ ನಿರ್ದೇಶನ ಮಾಡಿದ ’ಗುಡ್‌ಲಕ್’ ಚಿತ್ರಕ್ಕೂ ನಿರ್ಮಾಪಕರಾಗಿದ್ದವರು ಈ ಚಿತ್ರಕ್ಕೂ ಮುಂದುವರೆದಿದ್ದಾರೆ. ಸಾಯಿ ಕಾರ್ತಿಕ್ ಈ ಚಿತ್ರದ ಸಂಗೀತ ನಿರ್ದೇಶಕರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed